APOLLO 24X7 HELPLINE : 0821-2568888

Home Lohith’s organs donated saving 8 lives

Lohith’s organs donated saving 8 lives

Lohith’s organs donated saving 8 lives
~ Heart, 2 Kidneys, Pancreas, Liver, and Corneas donated

Mysore, Sep 30, 2022: Mr. Lohith, 31 Yrs. was brought to Apollo BGS Hospitals, Mysore on Tuesday 27th Sep, 2022 at 1.14 pm from Brindavan Hospital, Mysuru in a critical condition after he met with a RTA on Monday evening near Bilikere, Hunsur. Initial CT scan showed brain stem infarct. He was shifted to ICU immediately for life support and intensive care.

Mr. Lohith was kept on life support for two days while he was in a very critical state. On the third day, Sep 30th at 12.50 am he was declared brain dead due to brain stem failure as per the hospital protocol stipulated by the transplant of human organs act 1994 by panelist doctors at Apollo BGS Hospitals, Mysore. Mr. Lohith was healthy before this accident and further tests confirmed his eligibility for organ donation. His family members were counselled for organ donation as per the defined protocol, the deceased patient’s parents came forward to donate his organs.

As per organ donation protocols, officials from Jeeva Sarthakathe which was earlier known as ZCCK initiated the process by the organ recipients waiting list. Today, at around 12.30 pm  Mr. Lohith’s Organs (Heart, 2 Kidneys, Pancreas, Liver, and Corneas) were harvested at Apollo BGS Hospitals, Mysuru. The Organs donated are as per the following table

Sl.no Organs Donated Recipient Hospital
1. Heart NH, Bangalore
2. Liver Apollo BGS Hospitals, Mysuru
3. One Simultaneous Kidney & Pancreas Apollo BGS Hospitals, Mysuru
4. One Kidney BGS Global, Bangalore
5 Corneas KR Hospital, Mysore

Apollo BGS Hospitals is the Licensed Multiorgan Transplants Centre in the Mysore Region. Apollo BGS Hospitals is very pleased and thankful to the deceased family for coming forward for this noble cause in promoting organ donation and also to Mysore City Traffic Police and Highway police authorities for extending their support in creating the timely ‘Green corridor’ from Apollo BGS Hospitals, Mysore to NH, Bangalore towards the Heart transfer.

Authorized Signatory,
G. Bharateesha Reddy
Vice-President & Unit Head,
Apollo BGS Hospitals, Mysuru

—–

ಲೋಹಿತ್ ಅವರ ಅಂಗಾಂಗಗಳು ದಾನ ಮಾಡಿ 8 ಜೀವಗಳನ್ನು ಉಳಿಸಲಾಯಿತು

~ ಹೃದಯ, 2 ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ ~

ಮೈಸೂರು, ಸೆಪ್ಟೆಂಬರ್ 30, 2022: ಶ್ರೀ ಲೋಹಿತ್, 31 ವರ್ಷ ಅವರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಬೃಂದಾವನ ಆಸ್ಪತ್ರೆಯಿಂದ ಮಂಗಳವಾರ 27 ಸೆಪ್ಟೆಂಬರ್, 2022 ಮಧ್ಯಾಹ್ನ 1.14 ಕ್ಕೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ಹುಣಸೂರಿನ ಬಿಳಿಕೆರೆ ಬಳಿ ಸೋಮವಾರ ಸಂಜೆ ಅವರು ರಸ್ತೆ ಅಪಘಾತಕ್ಕೀಡಾದರು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.

ಶ್ರೀ ಲೋಹಿತ್ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದು ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಸೆ.30ರ ಮಧ್ಯರಾತ್ರಿ 12.50ಕ್ಕೆ, ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ “ಬ್ರೆನ್ ಡೆಡ್” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು.   ಈ ಘಟನೆಯ ಮೊದಲು ಶ್ರೀ ಲೋಹಿತ್ ರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ  ಪಡಿಸಲಾಯಿತು. ನಿಗದಿತ ಪ್ರೋಟೋಕಾಲ್ಗಳ  ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ಶ್ರೀ ಲೋಹಿತ್ ರವರ ಕುಟುಂಬದವರು ಅಂಗಾಂಗ ದಾನ ಮಾಡಲು ಮುಂದೆ ಬಂದರು.

ಅಂಗಾಂಗ ದಾನ ಪ್ರೋಟೋಕಾಲ್‌ಗಳ ಪ್ರಕಾರ, ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಇಂದು ಮಧ್ಯಾಹ್ನ 12.30 ಕ್ಕೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ  ಶ್ರೀ ಲೋಹಿತ್ ಅವರ ಅಂಗಗಳನ್ನು (ಹೃದಯ, 2 ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಯಕೃತ್ತು ಮತ್ತು ಕಾರ್ನಿಯಾಸ್ ಗಳ್ಳನ್ನು) ಕಸಿ ಮಾಡಲಾಯಿತು. ಮೈಸೂರಿನ ಅಪೋಲೊ ಬಿಜಿ‌ಎಸ್ ಆಸ್ಪತ್ರೆಯಿಂದ ಕೆಳಗಿನ ಆಸ್ಪತ್ರೆಗಳಿಗೆ ಅಂಗಗಳನ್ನು ವರ್ಗಾಯಿಸಲಾಗಿದೆ

ಕ್ರಮ ಸಂಖ್ಯೆ ದಾನ ಮಾಡಿದ ಅಂಗ

 

ಅಂಗ ದಾನ ಪಡೆದ ಆಸ್ಪತ್ರೆ
1. ಹೃದಯ NH, ಬೆಂಗಳೂರು
2. ಲಿವರ್ ಅಪೋಲೊ  ಬಿಜಿಎಸ್ ಆಸ್ಪತ್ರೆ ಮೈಸೂರು
3. ಒಂದು ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿ ಅಪೋಲೊ  BGS ಆಸ್ಪತ್ರೆ, ಮೈಸೂರು
4. ಒಂದು ಕಿಡ್ನಿ ಬಿಜಿಎಸ್ ಗ್ಲೋಬಲ್, ಬೆಂಗಳೂರು
5 ಕಾರ್ನಿಯಾಸ್ ಕೆಆರ್ ಆಸ್ಪತ್ರೆ, ಮೈಸೂರು

ಅಪೋಲೊ  ಬಿಜಿ‌ಎಸ್ ಆಸ್ಪತ್ರೆ, ಮೈಸೂರು  ಈಗ ಬಹು ಅಂಗಾಂಗ ಕಸಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದ ಮೃತ ಕುಟುಂಬಕ್ಕೆ ಅಪೋಲೊ ಬಿಜಿ‌ಎಸ್ ಆಸ್ಪತ್ರೆಯು ಧನ್ಯವಾದಗಳನ್ನು ಅರ್ಪಿಸುತ್ತದೆ ಹಾಗು, ಮೈಸೂರು ನಗರ ಸಂಚಾರ ಪೊಲೀಸ್ ವಿಭಾಗಕ್ಕೆ ಮತ್ತು ಹೈವೇ ಪೊಲೀಸರಿಗೆ  ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ಯಿಂದ  NH ಬೆಂಗಳೂರಿನವರೆಗೆ ತುರ್ತು ಅಂಗ ವರ್ಗಾವಣೆಗಾಗಿ ‘ಗ್ರೀನ್  ಕಾರಿಡಾರ್’ ನ್ನು ರಚಿಸಲು ತಮ್ಮ ಬೆಂಬಲವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ.

ಅಧಿಕೃತ ಸಹಿ
ಎನ್. ಜಿ. ಭರತೀಶ ರೆಡ್ಡಿ
ಉಪಾಧ್ಯಕ್ಷರುಆಡಳಿತ ವಿಭಾಗ
ಮತ್ತು ವಿಭಾಗದ ಮುಖ್ಯಸ್ಥರು
ಅಪೋಲೋ  ಬಿಜಿ‌ಎಸ್ ಆಸ್ಪತ್ರೆ, ಮೈಸೂರು 

Telephone CallCall Us Now+91 8069991025 Book ProHealth Book Appointment

Request A Call Back

Close